ಬೆಂಗಳೂರು ಉತ್ತರ: ‘ಮಾಸದ ಮಾಧುರ್ಯ’ ಶೋಭಾಯಾತ್ರೆಗೆ ಬಿ.ವೈ. ವಿಜಯೇಂದ್ರ ಚಾಲನೆ
ಜಗನ್ನಾಥ ಬಳಗ ಹಾಗೂ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ವತಿಯಿಂದ ಏರ್ಪಡಿಸಲಾದ ‘ಮಾಸದ ಮಾಧುರ್ಯ’ ಕಾರ್ಯಕ್ರಮದ ೧೦೦ನೇ ಸಂಭ್ರಮ ಶೋಭಾಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಬಿ.ವೈ. ವಿಜಯೇಂದ್ರ ಅವರು ಚಾಲನೆ ನೀಡಿದರು. ಶೋಭಾಯಾತ್ರೆ ರವಿವಾರ ೧೧ ಗಂಟೆ ಸುಮಾರಿಗೆ ಜಗನ್ನಾಥ ಭವನದಿಂದ ತೆಲುಗು ವಿಜ್ಞಾನ ಸಮಿತಿಯ ಶ್ರೀಕೃಷ್ಣ ದೇವರಾಯ ಸಭಾಂಗಣದವರೆಗೆ ನಡೆಯಿತು.