ಹಾಸನ: ಹಾಸನದಲ್ಲಿ ಹೆಚ್ಚಾದ ಗಾಂಜಾ ಹಾವಳಿ: ನಗರದ ಕೆ ಆರ್ ಪುರಂ ಖಾಲಿ ನಿವೇಶನ ಒಂದರಲ್ಲಿ ಗಾಂಜಾ ಗಿಡಗಳು ಪತ್ತೆ
Hassan, Hassan | Sep 16, 2025 ಹಾಸನ: ಹಾಸನ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು ಹಾಸನ ನಗರದ ಕೆ ಆರ್ ಪುರಂ 7ನೇ ಅಡ್ಡರಸ್ತೆಯ ನಿವೃತ್ತ ಶಿಕ್ಷಕ ಅಣ್ಣಯ್ಯ ಎಂಬುವರಿಗೆ ಸೇರಿದ ಖಾಲಿ ನಿವೇಶನದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ವಾಸವಿರುವ ನಿವೃತ್ತ ಶಿಕ್ಷಕ ಅಣ್ಣಯ್ಯ ಆರು ತಿಂಗಳ ಹಿಂದೆ ಖಾಲಿನಿವೇಶನದಲ್ಲಿ ಬೆಳೆದಿದ್ದ ಪಾರ್ಥೇನಿಯಂ ಸ್ವಚ್ಛಗೊಳಿಸಿದ್ದರು. ಮತ್ತೆ ಬೆಳೆದಿರುವ ಗಿಡಗಂಟಿಗಳ ಜೊತೆ ವ್ಯಸನಿಗಳು ಗಾಂಜಾ ಗಿಡಗಳನ್ನು ಬೆಳೆದಿದ್ದಾರೆ. ಖಚಿತ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು ಸುಮಾರು ಒಂದು ಕೆಜಿ ತೂಕದ ಐದು ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ ಗಾಂಜಾ ವ್ಯಸನಿಗಳು ಖಾಲಿ ಜಾಗದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡಲು ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.