ಬೀದರ್: ದಲಿತರ ಹಕ್ಕು ಕಬಳಿಸಲು ಯತ್ನಿಸಿದ ರವೀಂದ್ರ ಸ್ವಾಮಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ನಗರದಲ್ಲಿ ಮಾರುತಿ ಬೌದ್ದೆ ಒತ್ತಾಯ
Bidar, Bidar | Dec 2, 2025 ದಲಿತರ ಹಕ್ಕು ಕಬಳಿಸಲು ಯತ್ನಿಸಿದ ರವಿಂದ್ರ ಸ್ವಾಮಿ ವಿರೂದ್ಧ ಕಠಿಣ ಕ್ರಮ ಕೈಗೊಳ್ಳಿ: ಮಾರೂತಿ ಬೌದ್ದೆ ಬೀದರ್: 2016ರಿಂದ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವ ಮೂಲಕ ದಲಿತರು ಅದರಲ್ಲೂ ದುರ್ಬಲರ ಹಕ್ಕು ಕಸಿದುಕೊಳ್ಳಲು ಯತ್ನಿಸಿದ ಏಕತಾ ಫೌಂಡೆಷನ್ ಅಧ್ಯಕ್ಷ ರವಿಂಸ್ರ ಸ್ವಾಮಿ ಅವರ ವಿರೂದ್ಧ ಅಟ್ರಾಸಿಟಿ ಕೇಸ್ ದಾಖಲಿಸಿ ಅವರನ್ನು ಗಡಿಪಾರು ಮಾಡುವಂತೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರೂತಿ ಬೌದ್ಧೆ ಆಗ್ರಹಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಕಳೆದ ಏಳೆಂಟು ವರ್ಷಗಳಿಂದ ರವೀಂದ್ರ ಸ್ವಾಮಿ ಅವರ ಜಂಗಮ ಎಸ್‌ಸಿ ಪ್ರಮಾಣಪತ್ರ ವಿವಾದಿತ ಚರ್ಚೆಯಲ್ಲಿದೆ. ರವೀಂದ್ರ ಸ್ವಾಮಿ 2016ರಲ್ಲಿ ಎಸ್ಸಿ ಬೇಡ ಜಂಗಮ ಪ್ರಮಾಣಪತ್ರಕ್ಕೆ ಅ