ಮೊಳಕಾಲ್ಮುರು: ಬಿಜಿಕೆರೆ ಗ್ರಾಮದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಆಟೋ ಡಿಕ್ಕಿ
ಮೊಳಕಾಲ್ಮುರು:-ಬಿಜಿಕೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ಆಟೋ ಡಿಕ್ಕಿ ಪಡಿಸಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ. ಭಾನುವಾರ ಬೆಳಿಗ್ಗೆ 7:30ಕ್ಕೆ ಬಿಜಿಕೆರೆ ಗ್ರಾಮದ ಬಸವೇಶ್ವರನಗರದ ಯರಬಳ್ಳಿ ಮಾರಮ್ಮ ದೇವಿ ನರ್ಸರಿ ಹತ್ತಿರ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ತಿಪ್ಪೇಸ್ವಾಮಿಗೆ ಬಿಜಿಕೆರೆ ಗ್ರಾಮದ ಬಸ್ ನಿಲ್ದಾಣದ ಕಡೆಯಿಂದ ಬಂದ ಪ್ಯಾಸೆಂಜರ್ ಆಟೋ ಚಾಲಕ ತನ್ನ ವಾಹನವನ್ನು ಅತಿ ವೇಗವಾಗಿ ಅಜಾಗ್ರತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಿಪ್ಪೇಸ್ವಾಮಿಗೆ ಡಿಕ್ಕಿ ಹೊಡೆದಿದೆ.