ಚಾಮರಾಜನಗರ: ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್: ನನ್ನ ಮಗನ ತಪ್ಪಿಲ್ಲ,ಬಿಡುಗಡೆ ಕಲ್ಪಿಸಿ ಎಂದು ನಂಜೇದೇವನಪುರದಲ್ಲಿ ಪೋಷಕರ ಕಣ್ಣೀರು
ಚಾಮರಾಜನಗರ ತಾಲೂಕಿನ ನಂಜೇದೇವನಪುರ ಗ್ರಾಮದ ಅಭಿಷೇಕ್ ನಟಿ ರಮ್ಯ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ್ದಾನೆ ಎಂದು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪೋಷಕರು ಮಾದೇಶ್, ಹಾಗೂ ತಾಯಿ ಅಜ್ಜಿ ಮಾತನಾಡಿ ನನ್ನ ಮಗನಿಗೆ ದಿನಸಿ ಸಾಮಾನು ಚೀಟಿ ಬರೆಯೊಕೆ ಬರೊಲ್ಲ, ಇಂಗ್ಲಿಷ್ ಅಂತೂ ಮೊದ್ಲೇ ಬರೊಲ್ಲ, ಸ್ನೇಹಿತ ಮಾಡಿದ ಕಾಮೆಂಟ್ ಗೆ ನನ್ನ ಮಗ ಜೈಲು ಸೇರಿದ್ದಾನೆ. ರಮ್ಯಾ ಮೇಡಂ ನಿಮ್ಮ ಕಾಲಿಗೆ ಬೀಳ್ತಿವಿ ನನ್ನ ಮಗನನ್ನು ಬಿಡಿಸಿಕೊಡಿ, ನನ್ನ ಮಗ ಅಭಿಷೇಕ್ ಗೂಡ್ಸ್ ಆಟೋ ಓಡಿಸಿಕೊಂಡು ಇಡೀ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ