ಕಲಬುರಗಿ: ಯಾದಗಿರಿಯಲ್ಲಿ ಶಹಬಾದ್ ಮೂಲದ ಸರ್ಕಾರಿ ನೌಕರಸ್ಥೆ ಮೇಲೆ ಮಾರಣಾಂತಿಕ ಹಲ್ಲೆ, ಕಲಬುರಗಿ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ
ಕಲಬುರಗಿ : ಯಾದಗಿರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್.ಡಿ.ಎ ಕೆಲಸ ಮಾಡ್ತಿದ್ದ ಕಲಬುರಗಿ ಜಿಲ್ಲೆ ಶಹಬಾದ್ ಮೂಲದ ಅಂಜಲಿ ಎಂಬುವರ ಕಾರಿನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಹತ್ಯೆಗೆ ಯತ್ನಿಸಿದ್ದು, ನ11 ರಂದು ಮಧ್ಯಾನ 12 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಹಾಡಹಗಲೇ ಯಾದರಿಯಲ್ಲಿ ಕೊಡಲಿಯಿಂದ ಕಾರಿನ ಮೇಲೆ ಅಟ್ಯಾಕ್ ಮಾಡಿ ಮನಸ್ಸೋ ಇಚ್ಚೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.. ಸದ್ಯ ಗಂಭೀರ ಸ್ಥಿತಿಯಲ್ಲಿರೋ ಅಂಜಲಿಯನ್ನ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.. ಎರಡು ವರ್ಷದ ಹಿಂದೆ ಅಂಜಲಿ ಪತಿ ಗಿರೀಶ್ ಕಂಬಾನುರ್‌ನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು..