ಬೀಳಗಿ: ಯುವಪರಿವರ್ತನೆ ಯಾತ್ರೆ ಯಾವ ಪಕ್ಷದ ವಿರುದ್ಧವೂ ಅಲ್ಲ, ಪಟ್ಟಣದಲ್ಲಿ ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ
ಯುವ ಪರಿವರ್ತನೆ ಯಾತ್ರೆ ಇದು ಯಾವ ಪಕ್ಷದ ವಿರುದ್ಧವೂ ಅಲ್ಲ,ಇದು ಯುವಕರ ಜಾಗೃತಿಗಾಗಿ ಎಂದು ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಅವರು ಹೇಳಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣಕ್ಕೆ ಯುವಪರಿವರ್ತನೆ ಯಾತ್ರೆ ಆಗನಿಸಿದ ಹಿನ್ನಲೆಯಲ್ಲಿ ಅವರು ಯಾತ್ರೆಯನ್ನ ಉದ್ದೇಶಿಸಿ ಮಾತನಾಡಿದರು.ಬೀದರನಿಂದ ಬೆಂಗಳೂರಿನ ವರೆಗೆ ಯಾತ್ರೆ ಆರಂಭಿಸಿದ್ದು ಯುವಕರ ಜಾಗೃತಿಗಾಗಿ ಎಂದರು.ಇಂದಿನ ದಿನಮಾನಗಳಲ್ಲಿ ಯುವಕರು ದುಶ್ವಟಗಳಿಗೆ ಬಲಿಯಾದೆ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಂತಾಗಬೇಕೆಂದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯುವಪರಿವರ್ತನೆ ಯಾತ್ರೆಯೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ರೈತ ಮುಖಂಡರು,ಹೋರಾಟಗಾರರು ಉಪಸ್ಥಿತರಿದ್ದರು.