ಗುಡಿಬಂಡೆ: ಗುಡುಬಂಡೆ ಅಮಾನಿ ಬೈರಸಾಗರ ಕೆರೆಯಲ್ಲಿ ಕೆವಿ ದತ್ತಿ ಅಧ್ಯಕ್ಷ ನವೀನ್ ಕಿರಣ್ ಅವರ ಹುಟ್ಟುಹಬ್ಬ ಆಚರಣೆ
ಜಿಲ್ಲಾ ಅಧ್ಯಕ್ಷರಾದ ಗುಂಪು ಮರದ ಆನಂದ್ ಮಾತನಾಡಿ, ವಿದ್ಯಾದಾನಿಗಳು, ರಕ್ತದಾನಗಳು, ಸಮಾಜ ಸೇವಕರಾದ ಕೆ ವಿ ನವೀನ್ ಕಿರಣ್ ರವರು ಸುಮಾರು ಹತ್ತು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಸಿವಿ ಕ್ಯಾಂಪಸ್ ನಲ್ಲಿ ಏರ್ಪಡಿಸಿ, 11091 ಯೂನಿಟ್ ರಕ್ತವನ್ನು ಶೇಖರಿಸಿ ಸಾರ್ವಜನಿಕರಿಗೆ ಕೊಡುಗೆ ಕೊಟ್ಟಿದ್ದಾರೆ, ಅಂದರೆ ಒಂದು ಯೂನಿಟ್ ನಿಂದ ಮೂರು ವ್ಯಕ್ತಿಗಳ ಜೀವ ಉಳಿಸಬಹುದು ಆ ರೀತಿಯಲ್ಲಿ ಇದುವರೆಗೆ 33273 ವ್ಯಕ್ತಿಗಳ ಜೀವ ರಕ್ಷಣೆ ಮಾಡಿದ ಏಕೈಕ ವ್ಯಕ್ತಿ ಚಿಕ್ಬಳ್ಳಾಪುರದ ಕಣ್ಮಣಿ ಶ್ರೀ ಕೆ ವಿ ನವೀನ್ ಕಿರಣ್ ರವರು ಅದಕ್ಕೆ ಅವರ ಹುಟ್ಟುಹಬ್ಬವನ್ನು ಏಳು ದಿವಸಗಳ ಕಾಲ ಜಿಲ್ಲಾಧ್ಯಂತ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು