ಚಿಟಗುಪ್ಪ: ತಾಳಮಡಗಿ, ಮಂಗಲಗಿಯಲ್ಲಿ ಜೂಜು 12ಜನರ ಬಂಧನ, ₹10,810ಜಪ್ತಿ
ಸಾರ್ವಜನಿಕ ಸ್ಥಳದಲ್ಲಿ ಜುಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ತಾಲೂಕಿನ ತಾಳ್ಮಡಗಿ ಹಾಗೂ ಮಂಗಲಗಿ ಗ್ರಾಮಗಳಲ್ಲಿ ದಾಳಿಯನ್ನು ನಡೆಸಿ 12 ಜನರನ್ನು ಬಂಧಿಸಿ ಬಂಧಿತರಿಂದ ₹10,810ಜಪ್ತಿ ಮಾಡಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನಿರ್ದೇಶನದ ಮೇರೆಗೆ ಖಚಿತ ಮಾಹಿತಿ ಆದರಿಸಿ ದಾಳಿ ನಡೆಸಿರುವ ಪಿಎಸ್ಐ ಮಹೇಂದ್ರ ಕುಮಾರ್ ಹಾಗೂ ಸಿಬ್ಬಂದಿಯವರು ಎರಡು ಗ್ರಾಮಗಳಲ್ಲಿ ತಲಾ 6ಜನ ಸೇರಿ ಒಟ್ಟು 12 ಜನರನ್ನು ಬಂಧಿಸಿ, ಬಂಧಿತರ ವಿರುದ್ಧ ಮನ್ನಾಎಖೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ಭಾನುವಾರ ಮಧ್ಯಾನ 1ಕ್ಕೆ ತಿಳಿಸಲಾಗಿದೆ.