ದಾವಣಗೆರೆ: ಇದೇ ಮಾರ್ಗದಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಆರು ಯುವಕರ ಮೇಲೆ ನಗರದಲ್ಲಿ ದೂರು ದಾಖಲು
ಇಂಥಹುದೇ ಮಾರ್ಗದಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದ 6 ಯುವಕರ ಮೇಲೆ ಮಂಗಳವಾರ ಸಂಜೆ ದಾವಣಗೆರೆ ನಗರದ ಬಸವನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ದಾವಣಗೆರೆ ನಗರದ ಬಸವರಾಜ್ ಪೇಟೆಯಲ್ಲಿ ಟೌನ್ ಬಾಯ್ಸ್ ಗಣೇಶ ಸಮಿತಿಯಿಂದ ಪ್ರತಿಷ್ಟಾಪನೆ ಮಾಡಿದ್ದ ಗಣಪತಿ ಮೆರವಣಿಗೆಗೆ ಈ ಹಿಂದಿನ ಮಾರ್ಗದಂತೆ ಮದೀನಾ ಆಟೋ ಸ್ಟಾಂಡ್, ಹಾಸಬಾವಿ ಸರ್ಕಲ್ ಮೂಲಕ ಸಾಗಲು ಅವಕಾಶ ನೀಡಬೇಕು ಎಂದು ಯುವಕರು ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಗ್ವಾದ ನಡೆದು ಕೆಲಕಾಲ ಪರಿಸ್ಥಿತಿ ಬಿಗಡಾಯಿಸಿತ್ತು.