ಗದಗ: ದೇಶದಲ್ಲೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಕನ್ನಡಿಗರಿಗೆ ಲಭಿಸಿದೆ: ನಗರದಲ್ಲಿ ಕರವೇ ಶಿವರಾಮೇಗೌಡ್ರ ಬಣದ ಜಿಲ್ಲಾಧ್ಯಕ್ಷ ಎಂ. ಪಿ ಪರ್ವತಗೌಡ್ರ
Gadag, Gadag | May 29, 2025 ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಕನ್ನಡಿಗರಿಗೆ ಲಭಿಸಿದೆ. ಇದು ನಮಗೆ ಹೆಮ್ಮೆ ತರುವ ವಿಷಯವಾಗಿದೆ. ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇಂತಹ ಭಾಷೆ ತಮಿಳುನಿಂದ ಬಂದಿದೆ ಅಂತ ತಮಿಳು ನಟ ಕಮಲ್ ಹಾಸನ್ ಹೇಳಿದ್ದು ಅಕ್ಷಮ್ಯ ಅಪರಾಧವಾಗಿದೆ. ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಮತ್ತು ಕನ್ನಡಿಗರನ್ನು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂಬರುವ ಅವರ ಚಿತ್ರ ಪ್ರದರ್ಶನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಅಂತ ಕರ್ನಾಟಕ ರಕ್ಷಣಾ ವೇದಿಕೆ ಎಚ್. ಶಿವರಾಮೇಗೌಡ್ರ ಬಣದ ಜಿಲ್ಲಾಧ್ಯಕ್ಷ ಎಂ ಪಿ ಪರ್ವತಗೌಡ್ರ ಎಚ್ಚರಿಕೆ ನೀಡಿದರು.