ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ: ನಗರದಲ್ಲಿ ಮಾಜಿ ಶಾಸಕ ಮಹೇಶ ಕುಮುಠಳ್ಳಿ
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಮಾಜಿ ಶಾಸಕ ಮಹೇಶ ಕುಮುಠಳ್ಳಿ ಹೇಳಿದರು. ನನ್ನ ಗೆಲುವು ನಿಶ್ಚಿತ ಮತ್ತು 2018ರ ಮೊದಲು ಹಾಲಿ ಅಭ್ಯರ್ಥಿ ಲಕ್ಷ್ಮಣ ಸವದಿ ಪಿಕೆಪಿಎಸ್ ಹೆಚ್ಚಿಗೆ ಮಾಡಲು ವಿರೋಧ ಮಾಡಿದ್ದರು ಎಂದು ಹೇಳಿದರು ಭಾನುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಕಳೆದ 30 ವರ್ಷಗಳಿಂದ ನಡೆಯದಿದ್ದ ಅಥಣಿ ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಮತದಾನ ಮಾಡಿದ್ದೇನೆ, ನನ್ನ ಗೆಲುವು ನಿಶ್ಚಿತ ಎಂದು ಮಾಜಿ ಶಾಸಕ ಮಹೇಶ ಕುಮುಠಳ್ಳಿ ಅವರು ಹೇಳಿದರು