ದಾವಣಗೆರೆ: ಬೆಂಗಳೂರಿನಲ್ಲಿ ಕಾಲ್ತುಳಿತ ಸರ್ಕಾರದ ವೈಫಲ್ಯ, ಕೋರ್ಟ್ನಲ್ಲಿ ಕೇಸ್ ಹಾಕುತ್ತೇವೆ: ನಗರದಲ್ಲಿ ಪ್ರಣವಾನಂದ ಸ್ವಾಮಿ
ಬೆಂಗಳೂರಿನಲ್ಲಿ ಆರ್.ಸಿ.ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತಕ್ಕೆ ಸರ್ಕಾರ ಮತ್ತು ಕಾರ್ಯಕ್ರಮ ಆಯೋಜಕರ ವೈಫಲ್ಯವೇ ಕಾರಣ. ಘಟನೆ ಕುರಿತು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇವೆ. ಎಸ್ಪಿಗು ಮನವಿ ಮಾಡುತ್ತೇವೆ. ಅಲ್ಲೂ ಕ್ರಮ ಆಗಿಲ್ಲ ಎಂದರೆ ಕೋರ್ಟ್ನಲ್ಲಿ ಸಾರ್ವಜನಿಕರ ದೂರು ನೀಡುತ್ತೇವೆ ಎಂದು ಪ್ರಣಾವಾನಂದ ಸ್ವಾಮಿ ಅವರು ಹೇಳಿದರು. ದಾವಣಗೆರೆ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಅವಶ್ಯಕತೆ ಏನು ಇತ್ತು? ಕ್ರಿಕೆಟ್ ಪ್ರೇಮಿಗಳು ಉಸಿರು ಗಟ್ಟಿ ಸತ್ತಿದ್ದಾರೆ. ಆ ಉಸಿರು ನಿಮ್ಮ ಸರ್ಕಾರಕ್ಕೆ ತಟ್ಟದೆ ಇರದು ಎಂದರು.