ಚಿತ್ರದುರ್ಗ: ಚಿತ್ರದುರ್ಗ ಪತ್ರಕರ್ತರ ಭವನದಲ್ಲಿ ಹೃದಯ ರೋಗ ಉಚಿತ ತಪಾಸಣೆಗೆ ಕಾರ್ಡ್ ವಿತರಣೆ
ಸೋಮವಾರ ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಹೃದಯ ರೋಗ ತಪಾಸಣಾ ಕಾರ್ಡ್ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ಹಾಗೂ ಇಂಡಿಯಾನ ಎಸ್ ಜೆ ಎಂ ಹಾರ್ಟ್ ಸೆಂಟರ್ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ. ಮಲ್ಲಿಕಾರ್ಜುನಯ್ಯ ಉದ್ಘಾಟಿಸಿದರು. ಬಳಿಕ ಕಾರ್ಡ್ ಗಳನ್ನ ಹೊಳಲ್ಕೆರೆ ಕ್ಷೇತ್ರದ ಶಾಸಕರಾದ ಎಂ.ಚಂದ್ರಪ್ಪ ಸಾಂಕೇತಿಕವಾಗಿ ವಿತರಣೆ ಮಾಡಿದರು. ಬಳಿಕ ವೇಧಿಕೆ ಉದ್ದೇಶಿಸಿ ಮಾತ್ನಾಡಿದ ಅವರು ಇಂಡಿಯಾನ ಎಸ್.ಜೆ.ಎಂ ಹಾರ್ಟ್ ಸೆಂಟರ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.