ಬಸವಕಲ್ಯಾಣ: ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಿ; ನಗರದಲ್ಲಿ ಡಿಎಸ್ಎಸ್ ಒತ್ತಾಯ
ದಿನಾಂಕ .10/11/2025 ರಂದು ಬಸವಕಲ್ಯಾಣ ತಾಲೂಕಿನ D.S.S (ಅಂಬೇಡ್ಕರವಾದ) ತಾಲೂಕಿನ ಅಧ್ಯಕ್ಷರಾದ ಮಾಹಾದೇವ M ಗಾಯಕವಾಡ ರವರಿಂದ ಹಾಗು ಸಂಘಟನೆಯ ವತಿಯಿಂದ ತಹಶಿಲ್ದಾರವರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಕೆಳಗಿನ ಹಕ್ಕೊತ್ತಾಯಗಳು ಮನವಿ ಪತ್ರ ಸಲಿಸಲಾಯಿತ್ತು ಇಂದು 1) ಮಾನ್ಯ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಯವರಿಗೆ ಕರೆಮಾಡಿ ಅಶ್ಲೀಲ ಪದ ಬಳಸಿ ಹಾಗೂ ಜೀವ ಬೆದರಿಕೆ ಹಾಕಿದವರನ್ನು ಕಾನೂನು ಪ್ರಕಾರ ಜೀವ ಶಿಕ್ಷೆಗೆ ಗುರಿ ಪಡೆಸಬೇಕು. 2) ಉದ್ದೇಶಪೂರ್ವಕವಾಗಿ ಚಿತ್ತಾಪುರನ್ನು ಗುರಿಯಾಗಿ ಇಟ್ಟುಕೊಂಡು ಪಥಸಚಲನ ಮಾಡಲು ಹೂರಟ ಆರ್ ಎಸ್ ಎಸ್ ಸರಕಾರದ ಷರತ್ತು ಬದ್ದು ನಿಯಮ ಮೀರಿ ಕಾರ್ಯಾಕ್ರಮ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕು.