ಗುಳೇದಗುಡ್ಡ: ತಾಲೂಕಿನ ನಾಗರಾಳ ಗ್ರಾಮದ ರಸ್ತೆಯಲ್ಲಿ ನಿಂತ ನೀರನ್ನು ತೆರವುಗೊಳಿಸಿದ ತಾಲೂಕು ಆಡಳಿತ
ಗುಳೇದಗುಡ್ಡ ತಾಲೂಕಿನ ನಾಗರಾಳ ಎಸ್ಪಿ ಗ್ರಾಮದಿಂದ ಐತಿಹಾಸಿಕ ಸ್ಥಳ ಪಟ್ಟದಕಲ್ಲಿಗೆ ತೆರಳುವ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನಿಂತ ನೀರನ್ನು ತಾಲೂಕು ಆಡಳಿತ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ ರಸ್ತೆ ಮೇಲೆ ನಿಂತ ನೀರನ್ನು ರೈತರ ಮನವಲಿಸಿ, ತೆರವುಗೊಳಿಸುವ ಕಾರ್ಯವನ್ನು ತಾಲೂಕು ಆಡಳಿತ ಇಂದು ಮಾಡಿತು