ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿರುವ ಸುಂಕೇಶ್ವರಹಾಳ್ ಗ್ರಾಮದ ಅನಧಿಕೃತ ಕೋಚಿಂಗ್ ಸೆಂಟರ್ ಕೆ.ಆರ್. ಶಾಲೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ದಲಿತ ಸೇನೆ ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಿದರು. ಮಾನ್ಯತ ಪತ್ರ ಹಾಗೂ ಕೋಚಿಂಗ್ ಸೆಂಟರನ ಅನುಮತಿ ಪತ್ರವನ್ನು ಕೂಲಂಕುಶವಾಗಿ ತನಿಖೆಗೆ ಒಳಪಡಿಸಬೇಕು, ಏಕೆಂದರೆ ಸರ್ಕಾರದ ಆದೇಶಕ್ಕೆ ಕಿಂಚಿತ್ತು ಕಿಮ್ಮತ್ತು ಕೊಡದೆ ಸುಳ್ಳು ಭರವಸೆ ಕೊಟ್ಟು ಬಡ ರೈತರ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದರೆ ಎಂದು ಆರೋಪಿಸೊದರು.