ಬಾಗಲಕೋಟೆ: ನಗರದಲ್ಲಿ ಚೀತಾ ವಿಶೇಷ ಗಸ್ತು ವಾಹನ ಸಿಬ್ಬಂದಿಯವರ ಸಭೆ, ಸೂಕ್ತ ಸಲಹೆ ಸೂಚನೆ ನೀಡಿದ ಹಿರಿಯ ಅಧಿಕಾರಿಗಳು
ಬಾಗಲಕೋಟೆ ನಗರದಲ್ಲಿಂದು ‘ಚೀತಾ’ ವಿಶೇಷ ಗಸ್ತು ಪಡೆಯ ಸಿಬ್ಬಂದಿಯವರಿಗೆ ಸಾರ್ವಜನಿಕ ಶಾಂತಿ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಬಾಗಲಕೋಟೆ ನಗರದ ಶಹರ್ ಪೊಲೀಸ್ ಠಾಣೆಯ ಅಧಿಕಾರಿಗಳು ಸೂಕ್ತ ಸೂಚನೆಗಳನ್ನು ನೀಡಿದರು.ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಬಂದೋಬಸ್ತ್ ವಿಚಾರವಾಗಿ ಸಲಹೆ ಸೂಚನೆಗಳನ್ನು ನೀಡಿದರು.