ತಿರುಮಕೂಡಲು ನರಸೀಪುರ: 4.70 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಳಪೆ 2 ದಿನಗಳಲ್ಲೇ ರಸ್ತೆ ಹಾಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: #localissue
ತಿ. ನರಸೀಪುರ: ಹಲವು ವರ್ಷಗಳಿಂದ ಹಳ್ಳ-ಗುಂಡಿಗಳಿಂದ ತುಂಬಿ ಹೋಗಿದ್ದ ರಸ್ತೆಗಳಲ್ಲಿ ಸಂಚರಿಸಿ ಹೈರಾಣಾಗಿದ್ದ ತಿ. ನರಸೀಪುರ ಪಟ್ಟಣದ ಜನತೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಕೊಂಚ ನೆಮ್ಮದಿ ಸಿಕ್ಕಿತ್ತು. ಆದರೆ, ಈ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಬರೋಬ್ಬರಿ 4 ಕೋಟಿ 70 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಂಡಿದ್ದ ಡಾಂಬರೀಕರಣ ಕಳಪೆಯಾಗಿದ್ದು, ಕಾಮಗಾರಿ ಮುಗಿದ ಎರಡೇ ದಿನಕ್ಕೆ ರಸ್ತೆ ಹಾಳಾಗಿದೆ ಎಂದು ಪಟ್ಟಣದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭೆ ವ್ಯಾಪ್ತಿಯ ಕೆನರಾ ಬ್ಯಾಂಕ್ ರಸ್ತೆ, ಕುರಬಗೇರಿ, ವಿಶ್ವಕರ್ಮ ಬೀದಿ ಮತ್ತು ಗೋಪಾಲಪುರ ಮುಂತಾದ ಕಡೆಗಳಲ್ಲಿ ನಡೆದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುಣಮಟ್ಟ ಅತ್ಯಂತ ಕಳಪೆಯಿಂದ ಕೂಡಿದೆ. ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆಗಳು ಹಾಳಾಗಿದೆ.