ನಾಗಮಂಗಲ: ನಾಗಮಂಗಲ ತಾಲ್ಲೂಕಿನ ಮಾರ್ಕೋನಹಳ್ಳಿ ಡ್ಯಾಂ ನಿಂದ ಏಕಾಏಕಿ ನೀರು ಬಿಡುಗಡೆ, ಇಬ್ಬರ ಸಾವು, ನಾಲ್ವರ ಕಣ್ಮರೆ
ನಾಗಮಂಗಲ : ಏಕಾಏಕಿ ಡ್ಯಾಂ ನಿಂದ ನದಿಗೆ ನೀರು ಬಿಟ್ಟ ಪರಿಣಾಮ ನೀರಿನ ಮುಳುಗಿ ಇಬ್ಬರು ಸಾವನ್ನದ್ದು ನಾಲ್ವರು ಕಣ್ಮರೆಯಾಗಿರುವುದರ ಜೊತೆಗೆ ಮತ್ತೊಬ್ಬ ತೀವ್ರವಾಗಿ ಗಾಯ ಗೊಂಡು ಆಸ್ಪತ್ರೆಗೆ ಸೇರಿರುವ ದುರಂತ ಘಟನೆ ನಾಗಮಂಗಲ ತಾಲ್ಲೂಕಿನ ಮಾರ್ಕೋನಹಳ್ಳಿ ಗ್ರಾಮದ ಬಳಿ ಜರುಗಿದೆ. ಮೃತರನ್ನು ತುಮಕೂರು ಜಿಲ್ಲೆ ಮಾಗಡಿ ಪಾಳ್ಯದ ವಾಸಿಗಳಾದ ಮೋಸಿನ್ ಎಂಬುವರ ಪತ್ನಿಯಾದ 32 ವರ್ಷದ ಸಾದಿಯಾಬಾನು, ಆಕೆಯ ಸಹೋದರಿ 38 ವರ್ಷದ ಅರ್ಬಿನ್ ಬಾನು ಎಂದು ಗುರುತಿಸ ಲಾಗಿದ್ದು ತೀವ್ರವಾಗಿ ಗಾಯಗೊಂ ಡಿರುವ ನವಾಜ್ ಸ್ಥಿತಿ ಚಿಂತಾಜನಕ ವಾಗಿದೆ ಎನ್ನಲಾಗಿದೆ. ಉಳಿದಂತೆ 47 ವರ್ಷದ ತಬಾಸುಮ್ , 44 ವರ್ಷದ ಶಬಾನ, 1 ವರ್ಷದ ಮಾಹಿಬ್, ಹಾಗೂ 4 ವರ್ಷದ ಮಿಫ್ರ, ಕಾಣೆಯಾಗಿದ್ದು ಇವರಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ.