ಇಳಕಲ್: ನಗರದ ಕಂಠಿ ಸರ್ಕಲ್ದಲ್ಲಿ ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್ ಸಂಚಾರಕ್ಕೆ ಅಡತಡೆ
Ilkal, Bagalkot | Oct 16, 2025 ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಕಂಠಿ ಸರ್ಕಲ್ದಲ್ಲಿ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುತ್ತಿದ್ದರಿಂದ ವಾಹನಗಳ ಸಂಚಾರಕ್ಕೆ ಅಡತಡೆ ಉಂಟಾಗುತ್ತಿದೆ. ಪ್ರಮುಖ ರಸ್ತೆಯಲ್ಲಿ ಬ್ಯಾಂಕ್, ಹೋಟಲ್, ಕಿರಾಣಿ ಅಂಗಡಿ, ದೇವಸ್ಥಾನ ಇರುವದ್ದರಿಂದ ಜನರು ತಮ್ಮ ವಾಹನಗಳನ್ನು ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುತ್ತಿದ್ದರಿಂದ ಬಸ್ಗಳು ಮತ್ತು ಲಾರಿಗಳ ಬಂದರೇ ಸಾಕು ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಕ್ಕೆ ಅಡತಡೆ ಉಂಟಾಗುತ್ತಿದ್ದು. ಪೋಲಿಸ್ ಇಲಾಖೆ ಕಂಠಿ ಸರ್ಕಲ್ದಲ್ಲಿ ಸಂಚಾರಿ ಪೋಲಿಸ್ರನ್ನು ನೇಮಿಸಿ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.