ಸಾಸಲು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಬುಲೆರೋ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಮಂಗಳವಾರ ಸಂಜೆ 7 ಗಂಟೆ ವೇಳೆ ಘಟನೆ ನಡೆದಿದ್ದು ಹೊಳಲ್ಕೆರೆ ತಾಲ್ಲೂಕಿನ ಕಲ್ಲವ್ವನಾಗತಿಹಳ್ಳಿ ಮೂಲದ ಗಿರಿರಾಜ್, ಕಿರಣ್, ಅರುಣ್, ಹನುಮಂತಪ್ಪ ಎಂಬ ನಾಲ್ವರು ಮೃತಪಟ್ಟಿದ್ದು ಇನ್ನೂ ನಾಲ್ಕು ಮಂದಿ ಗಂಬೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ