ಹನೂರು: ತಂದೆ ಹತ್ಯೆ ಪ್ರಕರಣ :ಪಾಕಿನಾಥನ್ ಉತ್ತಮ ವ್ಯಕ್ತಿ, ಸಂಬಂಧಿಕ ಮಣಿ ಪ್ರತಿಕ್ರಿಯೆ
ಹನೂರು ತಾಲೂಕಿನ ಸಂದ್ಯಾಯನಪಾಳ್ಯ ಗ್ರಾಮದಲ್ಲಿ ಮಗ ಜಾನ್ಸನ್ ತನ್ನ ತಂದೆ ಪಾಕಿನಾಥನ್ ರವರನ್ನು ಕ್ರೂರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ, ಮೃತನ ಸಂಬಂಧಿಕ ಮಣಿ ಮಾಧ್ಯಮದೊಂದಿಗೆ ಮಾತನಾಡಿ ಪಾಕಿನಾಥನ್ ಬಗ್ಗೆ ಶೋಕಭರಿತ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿನಾಥನ್ ನನ್ನ ಬಾಲ್ಯದಿಂದಲೂ ಒಟ್ಟಾಗಿ ವಿದ್ಯಾಭ್ಯಾಸ ಮಾಡಿದ ಸ್ನೇಹಿತ. ಅವರು ನಿಜವಾಗಿಯೂ ಒಳ್ಳೆಯ ವ್ಯಕ್ತಿ, ಸದಾ ಸ್ನೇಹಜೀವಿಯಾಗಿದ್ದರು. ಇಂತಹ ವ್ಯಕ್ತಿಗೆ ಅವನು ಮಗನೇ ಕೊಲೆ ಮಾಡಿರುವುದು ತುಂಬಾ ನೋವಿನ ವಿಷಯ," ಎಂದು ಮಣಿ ತೀವ್ರ ಬೇಸರ ವ್ಯಕ್ತಪಡಿಸಿದರು.