ಕೃಷ್ಣರಾಜಪೇಟೆ: ಪಟ್ಟಣದ ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರ ಧರಣಿ, ಪ್ರಕರಣ ವಾಪಸ್ಸಿಗೆ ಆಗ್ರಹ
K. R. ಪೇಟೆ ಪಟ್ಟಣದ ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರ ಧರಣಿ, ಪ್ರಕರಣ ವಾಪಸ್ಸಿಗೆ ಆಗ್ರಹ ಕೆ ಆರ್ ಪೇಟೆ ಪಟ್ಟಣದ ಮಾರ್ಗೋನಹಳ್ಳಿ ಗ್ರಾಮದ ರೈತರು, ಹತ್ತಾರು ವರ್ಷಗಳಿಂದ ಗೋಮಾಳದ ಜಾಗದಲ್ಲಿ ಸ್ವಾಧೀನದಲ್ಲಿದ್ದ ತಮ್ಮನ್ನು ಒಕ್ಕಲೆಬ್ಬಿಸಿ, ಜಮೀನು ವಶಪಡಿಸಿಕೊಳ್ಳಲು ಪ್ರಭಾವಿ ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಆರೋಪಿಸಿ ಕಿಕ್ಕೇರಿ ಪೊಲೀಸ್ ಠಾಣೆ ಮುಂದೆ ಭಾನುವಾರ ಧರಣಿ ನಡೆಸಿದರು. ಈ ಪ್ರಕರಣವನ್ನು ವಾಪಸ್ಸು ಪಡೆಯುವಂತೆ ರೈತರು ಆಗ್ರಹಿಸಿದರು. ತಮ್ಮ ಮೇಲಾಗಿರುವ ಅನ್ಯಾಯಕ್ಕೆ ನ್ಯಾಯ ಕೋರಿ ರೈತರು ಪ್ರತಿಭಟನೆ ನಡೆಸಿದರು. ಈ ಕೂಡಲೇ ರೈತರಿಗೆ ನ್ಯಾಯ ಒದಗಿಸಿ ಕೊಡದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು