ತುಮಕೂರು: ನಗರದ ವಿವಿ ಆವರಣದಲ್ಲಿ ಮೋದಿ ಜನ್ಮದಿನ ಹಿನ್ನೆಲೆ, ಶಾಸಕ ಸುರೇಶ್ ಗೌಡ ಅವರಿಂದ ರಕ್ತದಾನ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನಲೆ ಸ್ವತಃ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ ಸುರೇಶ್ ಗೌಡ ರಕ್ತದಾನ ಮಾಡುವ ಮೂಲಕ ರೋಗಿಗಳಿಗೆ ನೆರವಾದರು. ಅವರು ನಗರದ ತುಮಕೂರು ವಿಶ್ವ ವಿದ್ಯಾನಿಲಯದ ಕಲಾ ಕಾಲೇಜು ಎದುರು ಬುಧವಾರ ಮಧ್ಯಾಹ್ನ 1 ರ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75 ನೇ ವರ್ಷದ ಜನ್ಮ ದಿನ ಹಿನ್ನಲೆ ಜಿಲ್ಲಾ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ರಕ್ಷದಾನ ಶಿಬಿರದಲ್ಲಿ ಭಾಗವಹಿಸಿದ್ದ ಅವರು ರಕ್ತದಾನ ಮಾಡುವ ಮೂಲಕ ಯುವ ಜನರಿಗೆ ಮಾದರಿಯಾದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸ್ವಾತಂತ್ರ್ಯ ನಂತರದ ಉಕ್ಕಿನ ಮನುಷ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮಗಾಗಿ ಏನನ್ನು ಮಾಡಿಕೊಳ್ಳಲಿಲ್ಲ, ಎಲ್ಲವನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದರು.