ಹುಲಸೂರ: ಸಿಜೆಐಗೆ ಅವಮಾನ: ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಜೀವಾವಧಿ ಶಿಕ್ಷೆಗೆ ಗುರಿ ಪಡಿಸಿ; ಪಟ್ಟಣದಲ್ಲಿ ದಲಿತಪರ ಸಂಘಟನೆಗಳ ಒತ್ತಾಯ
Hulsoor, Bidar | Oct 15, 2025 ಸಿಜೆಐಗೆ ಅವಮಾನ: ದಲಿತಪರ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರತಿಭಟನೆ || ಮನವಿ ಸಲ್ಲಿಕೆ ಹುಲಸೂರ : ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ದಲಿತಪರ ಸಂಘಟನೆಗಳ ಒಕ್ಕೂಟ ತಾಲ್ಲೂಕ ಘಟಕದ ವತಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬುಧುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಪೊಲೀಸ್ ಠಾಣೆಯ ಹತ್ತಿರದ ಮುಖ್ಯ ರಸ್ತೆಯ ವರೆಗೆ ಬುಧವಾರ ದಂದು ಪ್ರತಿಭಟನೆ ನಡೆಸಿದ ದಲಿತ ಪರ ಸಂಘಟನೆಗಳಾದ ಗ್ರಾಮ ಕ್ರಾಂತಿ ಸೇನೆ, ಭಾರತೀಯ ಬೌದ್ಧ ಮಹಾಸಭಾ, ವಾಯ್ಸ್ ಆಫ್ ಅ