ಆಳಂದ: ಖಜೂರಿ - ಬಂಗರ್ಗಾ ಕ್ರಾಸ್ ನಲ್ಲಿ ಬೈಕ್ ಗೆ ಲಾರಿ ಡಿಕ್ಕಿ - ಮಹಿಳೆ ರೇಖಾ (25 ) ಸಾವು
ಆಳಂದ ಉಮರ್ಗಾ ರಾಜ್ಯ ಹೆದ್ದಾರಿಯ ಖಜೂರಿ - ಬಂಗರ್ಗಾ ಕ್ರಾಸ್ ಮಧ್ಯೆ ಬೈಕಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ 7 ಘಂಟೆ ಸುಮಾರಿಗೆ ನಡೆದಿದೆ.ಮೃತ ಮಹಿಳೆ ರೇಖಾ ಭೀಮಾಶಂಕರ ಮೇಲಿನಕೇರಿ (25).ಆಳಂದ ತಾಲೂಕಿನ ಝಳಕಿ ಕೆ ಗ್ರಾಮದವರು. ಆಸ್ಪತ್ರೆಗೆಂದು ಉಮರ್ಗಾಕ್ಕೆ ಹೋಗಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.