ದಾಂಡೇಲಿ: ಜೆ.ಎನ್ ರಸ್ತೆಯಿಂದ ಹರಡುತ್ತಿರುವ ಧೂಳಿನ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಜೆ.ಎನ್.ರಸ್ತೆಯ ವರ್ತಕರಿಂದ ಮನವಿ
ದಾಂಡೇಲಿ : ನಗರದ ಪ್ರಮುಖ ರಸ್ತೆಯಾಗಿರುವ ಜೆ.ಎನ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದರಲ್ಲಿಯೂ ಈ ರಸ್ತೆಯಲ್ಲಿ ವಾಹನಗಳ ಸಂಚರಿಸುವ ಸಂದರ್ಭದಲ್ಲಿ ಎಲ್ಲೊಂದರಲ್ಲಿ ಹರಡುವ ಧೂಳಿನಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗುತ್ತಿದ್ದು, ಜೆ.ಎನ್.ರಸ್ತೆಯ ಬದಿಯಲ್ಲಿರುವ ವ್ಯಾಪಾರಸ್ಥರು ವ್ಯಾಪಾರ ಚಟುವಟಿಕೆಗಳನ್ನು ನಡೆಸಲು ತೀವ್ರ ತೊಂದರೆಯಾಗುತ್ತಿರುವುದರ ಜೊತೆಗೆ ಆರೋಗ್ಯದ ಮೇಲೆಯೂ ತೀವ್ರ ಪರಿಣಾಮ ಬೀರುತ್ತಿದೆ. ಇದಲ್ಲದೆ ದ್ವಿಚಕ್ರ ವಾಹನ ಸವಾರರು ಸ್ಕಿಡ್ಡಾಗಿ ಬಿದ್ದು ಗಾಯ ಮಾಡಿಕೊಳ್ಳುವುದು ಮಾಮೂಲಿಯಾಗಿದೆ. ರಸ್ತೆ ನಿರ್ಮಾಣ ಇಲ್ಲವೇ ದುರಸ್ತಿಗೆ ಸಾಕಷ್ಟು ಸಮಯ ಬೇಕಾಗಿರುವ ಹಿನ್ನಲೆಯಲ್ಲಿ ಅಲ್ಲಿಯವರೆಗೆ ಪ್ರತಿದಿನ ಎರಡ್ಮೂರು ಬಾರಿ ನಗರ ಸಭೆಯ ಮೂಲಕ ನೀರು ಸಿಂಪಡಿಸಲು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ವಿನಂತಿಸಲಾಗಿದೆ