ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ನ್ಯಾಯಾಧೀಶ ಗಾಯತ್ರಿ ತಿಳಿಸಿದರು. ಕುಂದಗೋಳ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬಾಲ್ಯ ವಿವಾಹ ಮತ್ತು ಪೊಕ್ಸೋ ಕಾಯಿದೆ ಕಾನೂನು ಅರಿವು ಮಾತನಾಡಿದ ಅವರು, ತಂದೆ-ತಾಯಿ ಕುಟುಂಬದಿಂದ ಕಲಿಕೆಗಾಗಿ ದೂರವಿರುವ ಮಕ್ಕಳು ಓದಿನ ಕಡೆ ಗಮನ ಕೊಡಬೇಕು, ಯಾವುದೇ ರೀತಿಯ ಆಕರ್ಷಣೆಗೆ ಒಳಗಾಗಬಾರದು ಎಂದು ತಿಳಿಸಿದರು.