ಯಳಂದೂರು: ಹೊನ್ನೂರು ಗ್ರಾಮದಲ್ಲಿ ಮನೆ ಗೋಡೆ ಕುಸಿದು 8 ತಿಂಗಳಾದರು ಪರಿಹಾರ ಸಿಗದೇ ವೃದ್ದೆಯ ಪರದಾಟ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಕೆಂಪಮ್ಮ ಎಂಬುವರ ಮನೆಯ ಗೋಡೆಗಳು ಕುಸಿದು ಎಂಟು ತಿಂಗಳು ಆಗಿದ್ದರು ಇದುವರೆಗೂ ಪರಿಹಾರ ಸಿಗದೇ ಪರದಾಟ ಪಡುತ್ತಿದ್ದಾರೆ. ಸತತ ಮಳೆಯಿಂದ ಕೆಂಪಮ್ಮ ಅವರ ಮನೆ ಗೋಡೆ ಕುಸಿದು ಎಂಟು ತಿಂಗಳಿಂದ ಸ್ಥಳಕ್ಕೆ ಆರ್.ಐ ಹಾಗೂ ವಿಐ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದ್ದಾರೆ ಆದರೂ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಕೆಂಪಮ್ಮ ಅವರ ಮಗ ಅನಾರೋಗ್ಯದಿಂದ ಬಳಲುತ್ತಿದ್ದು ಮಲಗಲು ಮನೆಯಿಲ್ಲದೇ ಮನೆ ಹೊರಗಡೆ ಮಲಗುತ್ತಿದ್ದಾರೆ.