ಕಮಲಾಪುರ: ರಸ್ತೆ ದುರಸ್ಥೆಗಾಗಿ ಹೇರೂರು ಕ್ರಾಸ್‌ನಲ್ಲಿ ಹಿಂದೂ ಜಾಗೃತಿ ಸೇನೆಯ ಬೃಹತ್ ರಸ್ತೆ ತಡೆ ಪ್ರತಿಭಟನೆ
ಚಿಂಚೋಳಿ–ಮಹಾಗಾಂವ್ ರಾಜ್ಯ ಹೆದ್ದಾರಿ ಹೇರೂರು ಕ್ರಾಸ್ ಬಳಿ ಹಿಂದೂ ಜಾಗೃತಿ ಸೇನೆಯ ನೇತೃತ್ವದಲ್ಲಿ ರಸ್ತೆ ದುರಸ್ತಿ ಬೇಡಿಕೆಗಾಗಿ ಭಾರೀ ಪ್ರತಿಭಟನೆ ನಡೆಯಿತು. ಟೈರ್ ದಹನ ಮಾಡಿ ರಸ್ತೆ ತಡೆದ ಪರಿಣಾಮ ವಾಹನ ಸಂಚಾರ ಸುಮಾರು 4 ಗಂಟೆಗಳ ಕಾಲ ಸ್ಥಗಿತಗೊಂಡಿತು. ಸ್ಥಳಕ್ಕೆ ಕಮಲಾಪುರ ತಹಸೀಲ್ದಾರರು ಆಗಮಿಸಿ 4 ದಿನಗಳಲ್ಲಿ ರಸ್ತೆ ಸರಿಪಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂದಕ್ಕೆ ತೆಗೆದುಕೊಂಡರು. ಮಂಗಳವಾರ 4 ಗಂಟೆ ವರೆಗೆ ಪ್ರತಿಭಟನೆ ನಡೆಯಿತು.