ಬೆಂಗಳೂರಿನ ಜೆಪಿ ನಗರದ ಸಚಿವ ಚೆಲುವರಾಯಸ್ವಾಮಿ ಅವರ ನಿವಾಸದ ಕಚೇರಿಗೆ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಗಮಿಸಿದ ನಾಗಮಂಗಲ ಹಾಗೂ ನಾಡಿನ ವಿವಿಧ ಭಾಗದ ಜನತೆಯನ್ನು ಭೇಟಿಯಾಗಿ ಸಮಸ್ಯೆಗಳು ಹಾಗೂ ಅಹವಾಲುಗಳನ್ನ ಆಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿಕೊಟ್ಟರು. ಇನ್ನು ಕೆಲವರ ಸಮಸ್ಯೆಗಳನ್ನ ಆಲಿಸಿದ ಸಚಿವರು ತ್ವರಿತವಾಗಿ ಬಗೆ ಹರಿಸುವುದಾಗಿ ಭರವಸೆ ನೀಡಿದರು.