ಚಳ್ಳಕೆರೆ: ದಾಸರಲಹಳ್ಳಿ ಗ್ರಾಮದಲ್ಲಿ 6 ದಿನಕ್ಕೆ ಸಮೀಕ್ಷೆ ಕರ್ತವ್ಯ ಮುಕ್ತಾಯಗೊಳಿಸಿದ ಶಿಕ್ಷಕಿ ಎಂ.ರಾಧ
ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ಕಾರ್ಯ ನಾನ ಕಾರಣಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೆ ಚಳ್ಳಕೆರೆ ತಾಲೂಕಿನ ದಾಸರಲಹಳ್ಳಿ ಗ್ರಾಮದ ಶಿಕ್ಷಕಿ ಎಂ.ರಾಧ ತಮಗೆ ನೀಡಿದ್ದ 116 ಮನೆಗಳ ಗಣತಿ ಕಾರ್ಯವನ್ನ ಕೇವಲ ಆರು ದಿನಗಳಲ್ಲಿ ಮುಕ್ತಾಯ ಮಾಡಿದ್ದಾರೆ. ಸೆ.22 ರಿಂದ ಅ. 7 ಕ್ಕೆ ಮುಕ್ತಾಯವಾಗುತ್ತದೆ. ಆದರೆ ಸರ್ಕಾರದ ನೀಡಿದ ಸಮಯಕ್ಕಿಂತ ಮುಂಚಿತವಾಗಿ ಮುಕ್ತಾಯಗೊಳಿಸಿ ಮೆಚ್ಚುಗೆ ಗಳಿಸಿದ್ದಾರೆ. ಚಳ್ಳಕೆರೆ ಪಟ್ಟಣದಿಂದ ದಾಸರಲಹಳ್ಳಿ ಗ್ರಾಮಕ್ಕೆ ಇವರು ಓಡಾಟ ಮಾಡುತ್ತಾರೆ. ರಾತ್ರಿ 9 ಗಂಟೆವರೆಗೂ ಸರ್ವೆ ಕಾರ್ಯ ಮಾಡಿ, ಬಳಿಕ ಬೆಳಿಗ್ಗರ 6 ರಿಂದ 8 ಗಂಟೆವರೆಗೂ ಸರ್ವೆ ಮಾಡಿದ್ದು, ಇದೀಗ ಸರ್ವೇ ಕಾರ್ಯ ಮುಕ್ತಾಯ ಮಾಡಿದ್ದಾರೆ.