ಮಳವಳ್ಳಿ: ತಾಲ್ಲೂಕಿನ ಹೆಗ್ಗೂರು ಗೇಟ್ ಬಳಿ ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ನೀವೃತ್ತ ಸೈನಿಕ ಸ್ಥಳದಲ್ಲೇ ಸಾವು
ಮಳವಳ್ಳಿ : ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಮೈಸೂರು ಮುಖ್ಯರಸ್ತೆಯ ಹೆಗ್ಗೂರು ಗೇಟ್ ಬಳಿ ಜರುಗಿದೆ. ತಾಲೂಕಿನ ಚಿಕ್ಕ ಮಾಳಿಗೆ ಕೊಪ್ಪಲು ಗ್ರಾಮದ ನಿವಾಸಿ ನೀವೃತ್ತ ಸೈನಿಕ 64 ವರ್ಷದ ವೆಂಕಟೇಶ್ ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದು ಬುಧವಾರ ಸಾಯಂಕಾಲ 5.30 ರ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯ ಮುಗಿಸಿ ವಾಪಸ್ ಸ್ವಗ್ರಾಮಕ್ಕೆ ಬೈಕ್ ನಲ್ಲಿ ಬರುತ್ತಿದ್ದಾಗ ಮಳವಳ್ಳಿ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸಮೇತ ರಸ್ತೆಗೆ ಬಿದ್ದ ವೆಂಕಟೇಶ್ ರವರ ತಲೆಗೆ ತೀವ್ರ ಪೆಟ್ಟುಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.