ಚಿತ್ತಾಪುರ: ವಾಡಿ ಪಟ್ಟಣದಲ್ಲಿ ಸರ್ಕಾರಿ ಶಾಲೆ ಮೇಲ್ಛಾವಣಿ ಕುಸಿತ: ಶಾಲಾ ರಜೆ ಹಿನ್ನಲೆ ತಪ್ಪಿದ ದೊಡ್ಡ ದುರಂತ
ಕಲಬುರಗಿ : ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಅಕ್ಟೋಬರ್ 14 ರಂದು ಬೆಳಗ್ಗೆ 11 ಗಂಟೆಗೆ ಸಂಭವಿಸಿದೆ.. ಶಾಲೆ ರಜೆ ಹಿನ್ನಲೆಯಲ್ಲಿ ಮಕ್ಕಳಿಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.. ಸಂಪೂರ್ಣ ಶಿಥಿಲವಾದ ಶಾಲಾ ಕಟ್ಟಡ ಡೆಮೋಲಿಷನ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ರು ಪ್ರಯೋಜನವಾಗಿರಲಿಲ್ಲ.. ಇನ್ನೂ ಕೆಲ ಶಿಕ್ಷಕರಿಂದ ಶಾಲೆಗೆ ಬಂದಿದ್ದು, ಈ ವೇಳೆಯೇ ಮೇಲ್ಛಾವಣಿ ಕುಸಿದಿದ್ದು, ಅದೃಷ್ಟವಶಾತ್ ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.