ದೇವನಹಳ್ಳಿ 'ಇತಿಹಾಸದ ಪುಟಗಳಲ್ಲಿ ಉದುಗಿ ಹೋಗಿದ್ದ ದಲಿತ ಸಮುದಾಯದ ಜನರ ಶೌರ್ಯ, ತ್ಯಾಗ, ಬಲಿದಾನದ ಪ್ರತೀಕವಾದ ಭೀಮಾ ಕೋರೆಗಾಂವ್ ಯುದ್ಧ ದಿನಾಚರಣೆಯನ್ನು ದೇವನಹಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ. 1818ರ ಜನವರಿ 1ರಂದು ಮಹಾರಾಷ್ಟ್ರದ ದಲಿತ ಮಹರ್ ಸೈನಿಕರು ಮತ್ತು ಪೇಶ್ವೆಗಳ ನಡುವೆ ನಡೆದ ಯುದ್ಧದಲ್ಲಿ ಕೇವಲ 500 ಮಹರ್ ಸೈನಿಕರು 25,000 ಸಾವಿರ ಪೇಶ್ವೆ ಸೈನಿಕರನ್ನ ಸದೆಬಡಿದು ವಿಜಯಶಾಲಿಗಳಾದ ಜ್ಞಾಪಕಾರ್ಥಕವಾಗಿ ವಿಜಯೋತ್ಸವ ಆಚರಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಜಯೋತ್ಸವದ ಭಾವಚಿತ್ರ ಸ್ತೂಪಕ್ಕೆ ಹೂವಿನ ಅಲಂಕಾರ ಮಾಡಿ, ಸಿಹಿ ಹಂಚಿ ದಲಿತ ನಾಯಕರುಗಳಿಂದ ದಲಿತರ ಯಶೋಗಾಧೆ