ಮಳವಳ್ಳಿ: ಹೆಚ್. ಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ ಗಿರೀಶ ಮತ್ತು ಉಪಾಧ್ಯಕ್ಷರಾಗಿ ಬಿ ಗುರುರಾಜ ಆಯ್ಕೆ
ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ಹೆಚ್. ಬಸಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿ. ಸುರೇಶ್ ಅವರು ಅಧ್ಯಕ್ಷರಾಗಿ, ಗುರುರಾಜ್ ಬಿ. ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮೂರು ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದರೂ, ಗೀತಾ ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ, ಬಿ. ಸುರೇಶ್ ಹಾಗೂ ಪುಟ್ಟಸ್ವಾಮಿ ಬಿ.ಟಿ. ನಡುವೆ ನೇರ ಸ್ಪಧರ್ೆ ಜರುಗಿತು. ಮತ ಎಣಿಕೆಯಲ್ಲಿ ಬಿ. ಸುರೇಶ್ ಅವರಿಗೆ 7 ಮತಗಳು ಬಿದ್ದು, ಪುಟ್ಟಸ್ವಾಮಿ ಬಿ.ಟಿ. ಅವರಿಗೆ 5 ಮತಗಳು ಬಂದವು. ಹೀಗಾಗಿ 2 ಮತಗಳ ಅಂತರದಿಂದ ಬಿ. ಸುರೇಶ್ ಜಯಗಳಿಸಿದರು. ಚುನಾವಣಾ ಅಧಿಕಾರಿ ರಾಮಕೃಷ್ಣ ಅವರು ಫಲಿತಾಂಶವನ್ನು ಘೋಷಿಸಿದರು. ಉಪಾಧ್ಯಕ್ಷ ಸ್ಥಾ