ಚಳ್ಳಕೆರೆ: ನಗರದ ಮೀನು ಮಾರುಕಟ್ಟೆಯಲ್ಲಿ ರಸ್ತೆಯ ಗುಂಡಿಗೆ ಬಿದ್ದ ಕಾರು, ಸವಾರರು ಪಾರು
ಚಳ್ಳಕೆರೆ ನಗರದ ಮೀನು ಮಾರುಕಟ್ಟೆ ರಸ್ತೆಯಲ್ಲಿ ಕಾರೊಂದು ಅಪಘಾತ ನಡೆದು ಸವಾರರು ಪಾರಾದ ಘಟನೆ ನಡೆದಿದೆ. ಬಾನುವಾರ ರಾತ್ರಿ 11 ಗಂಟೆ ವೇಳೆ ಘಟನೆ ನಡೆದಿದ್ದು ರಸ್ತೆ ಪಕ್ಕದ ಗುಂಡಿಗೆ ಕಾರು ಬಿದ್ದು ಸವಾರರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಕುಲುಮೆ ರಸ್ತೆ ಮೀನು ಮಾರುಕಟ್ಟೆ ಬಳಿ ರಸ್ತೆಯನ್ನ ದುರಸ್ತಿ ಮಾಡದೆ ಇರುವುದು ವಾಹನಗಳ ಅವಘಡಕ್ಕೆ ಕೈ ಬೀಸಿ ಕರೆಯುವಂತಾಗಿದೆ.