ದಾವಣಗೆರೆ: ಹೃದಯ, ಕಿಡ್ನಿ ಸೇರಿದಂತೆ ದೇಹದ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ತೆಗ್ಗಿನಹಳ್ಳಿ ಗ್ರಾಮದ ಗಾಯತ್ರಮ್ಮ
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ತೆಗ್ಗಿನಹಳ್ಳಿ ಗ್ರಾಮದ ನಿವಾಸಿ ದಿವಂಗತ ಬೀರಪ್ಪ ಅವರ ಪತ್ನಿ ಗಾಯತ್ರಮ್ಮ ಮೆದುಳು ನಿಷ್ಕ್ರಿಯೆಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯತ್ರಮ್ಮ ಮೃತರಾದರು. ಮೃತರ ಚಲನೆ ಇರುವ ದೇಹದ ಉಳಿದ ಭಾಗದ ಅಂಗಾAಗಳಾದ ಹೃದಯ, ಕಿಡ್ನಿ, ಲಿವರ್, ಶ್ವಾಸಕೋಶ ಮತ್ತು ಎರಡು ಕಣ್ಣಿನ ಪೊರೆಯನ್ನು ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕೆ ಮೆರೆದಿದ್ದಾರೆ. ತಾಯಿಯ ನೆನಪಿಗಾಗಿ ಬೇರೆಯವರ ಜೀವ ಉಳಿಸಲು ಅಂಗಾಂಗ ದಾನ ಮಾಡಲು ಅವರ ಮಕ್ಕಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಂಗಾಂಗ ದಾನವು ನಿಯಮಾವಳಿ ರೀತ್ಯಾ ನಡೆಯಲಿದೆ.