ಹಾಸನ: ಮೀಸಲು ಅರಣ್ಯದ ಹೆಸರಿನಲ್ಲಿ ಸರ್ಕಾರ ಸಾವಿರಾರು ಕುಟುಂಬಗಳ ಜೊತೆ ಚೆಲ್ಲಾಟ: ನಗರದಲ್ಲಿ ಮಾಜಿ ಸಚಿವ ಬಿ.ಶಿವರಾಂ
Hassan, Hassan | Oct 4, 2025 ಹಾಸನ: ಮೀಸಲು ಅರಣ್ಯದ ಹೆಸರಿನಲ್ಲಿ ಸರ್ಕಾರ ಸಾವಿರಾರು ಕುಟುಂಬಗಳ ಜೊತೆ ಚೆಲ್ಲಾಟವಾಡುತ್ತಿದ್ದು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಮಾಜಿ ಸಚಿವ ಬಿ. l ಶಿವರಾಮ್ ಆಗ್ರಹಿಸಿದರು.ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿ, ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ 20 ಸಾವಿರ ಕುಟುಂಬಗಳು ತೊಂದರೆಯಿಂದ ಬಳಲುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಜಾಗ ತಮದೆಂದು ರಾತ್ರೋ ರಾತ್ರಿ ಜೆಸಿಬಿ ನುಗ್ಗಿಸಿ ಕಂದಕ ನಿರ್ಮಿಸುವುದು, ಗಿಡ ನೆಡುವುದನ್ನು ಮಾಡುತ್ತಿದೆ. ಅದನ್ನು ಪ್ರಶ್ನಿಸುವ ರೈತರ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ. ತಾಲ್ಲೂಕಿನ ಅಡವಿ ಬಂಟೇನಹಳ್ಳಿ, ಶಿವಪುರ ಕಾವಲ್ ವ್ಯಾಪ್ತಿಯಲ್ಲಿ ವ್ಯಾಪಕ ಸಮಸ್ಯೆಯಾಗಿದ್ದು ಚಿರತೆ ರೀತಿ ಅರಣ್ಯ ಇಲಾಖೆ ರೈತರ ಮೇಲೆ ಎರಗುತ್ತಿದೆ ಎಂದರು.