ಬೆಂಗಳೂರು ಉತ್ತರ: ನಾನು ಸಿಎಂ ಆಗಲೆಂದು ಚಂದ್ರಶೇಖರ್ ಮಹಾಸ್ವಾಮೀಜಿ ಆಶೀರ್ವಾದ ಮಾಡಿದ್ದರು: ನಗರದಲ್ಲಿ ಅಂತಿಮ ದರ್ಶನ ಪಡೆದ ಡಿಸಿಎಂ ಶಿವಕುಮಾರ್
ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರು ವಿಧಿವಶರಾಗಿದ್ದು, ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಸದಾಶಿವನಗರದಲ್ಲಿ ಮಾತನಾಡಿ, ನಮ್ಮ ಸಮಾಜದ ಹಿರಿಯ ಸ್ವಾಮಿಗಳು ಅವರು, ತಮ್ಮದೇ ರೀತಿಯಲ್ಲಿ ಸಮಾಜ ಸೇವೆ ಮಾಡಿದ್ದಾರೆ. ಧಾರ್ಮಿಕವಾಗಿ ಕೆಲಸ ಮಾಡ್ತಿದ್ರು. ಸ್ವಾಮೀಜಿಗೆ ಬಹಳ ಭಕ್ತಾದಿಗಳು ಇದ್ರು. 25 ವರ್ಷ ಆಯ್ತು ಮಠ ಸ್ಥಾಪನೆಯಾಗಿ. ಯುವಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ನನಗೆ ಬಹಳ ಸಲ ಆಶೀರ್ವಾದ ಮಾಡಿದ್ದರು, ಸಿಎಂ ಆಗಲಿ ಎಂಬ ಆಶೀರ್ವಾದ ಮಾಡಿದ್ದಾರೆ ಎಂದು ಭಾವುಕರಾದರು.bega