ಯಳಂದೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಯಳಂದೂರಿನಲ್ಲಿ ಮಾಜಿ ಸಚಿವ ಎನ್.ಮಹೇಶ್ ಆಕ್ರೋಶ
ಹೊಂಗನೂರು ಗ್ರಾಮ ಪಂಚಾಯ್ತಿಯಲ್ಲಿ ಸಕಾಲಕ್ಕೆ ವೇತನ ನೀಡದ ಹಿನ್ನಲೆಯಲ್ಲಿ, ಮನನೊಂದ ವಾಟರ್ಮನ್ರೊಬ್ಬರು ಗ್ರಾಮ ಪಂಚಾಯ್ತಿ ಕಚೇರಿಯ ಗೋಡೆಯ ಮೇಲೆ ಡೆತ್ ನೋಟು ಬರೆದು ನೇಣಿಗೆ ಶರಣಾದ ದುರ್ಘಟನೆ ನಡೆದಿದ್ದು, ಈ ಬೆಳವಣಿಗೆಯ ಬೆನ್ನಲ್ಲೆ ಮಾಜಿ ಸಚಿವ ಎನ್. ಮಹೇಶ್ ಅವರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ ಸಚಿವ ಖರ್ಗೆ ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಕಣ್ಣು ಮುಚ್ಚಿದ್ದಾರೆ ಈ ಇಲಾಖೆ ಗ್ರಾಮೀಣ ಕಾರ್ಮಿಕರ ಬದುಕಿಗೆ ದಿಕ್ಕು ತೋರಿಸುವ ಪ್ರಮುಖ ಇಲಾಖೆ. ಆದರೆ ಸರಿಯಾಗಿ ನಿರ್ವಹಿಸುವ ಬದಲು ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು