ಕಾರವಾರ: ನ.17ರಂದು ಅಸ್ಮಿತಾ ಅಥ್ಲೆಟಿಕ್ ಲೀಗ್ ಆಯ್ಕೆ ಪ್ರಕ್ರಿಯೆ ಆರಂಭ ನಗರದಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಆರ್. ನಾಯಕ
ನಗರದ ಜಿಲ್ಲಾ ಪತ್ರಿಭವನದಲ್ಲಿ ಬುಧವಾರ ಮಧ್ಯಾಹ್ನ 2ಕ್ಕೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಆರ್. ನಾಯಕ ಮಹಿಳಾ ಅಥ್ಲೀಟ್ಗಳ ಪ್ರತಿಭೆ ಹೊರತರಲು ಭಾರತೀಯ ಕ್ರೀಡಾ ಪ್ರಾಧಿಕಾರ, ದೇಶ ಹಾಗೂ ರಾಜ್ಯ ಅಥ್ಲೆಟಿಕ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಅಸ್ಮಿತಾ ಅಥ್ಲೆಟಿಕ್ ಲೀಗ್ ಆಯ್ಕೆ ಪ್ರಕ್ರಿಯೆ ನವೆಂಬರ್ 17ರಂದು ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆಯಲಿದೆ. ಈ ಕ್ರೀಡಾಕೂಟವು 14 ವರ್ಷದೊಳಗಿನ ಹಾಗೂ 16 ವರ್ಷದೊಳಗಿನ ಬಾಲಕಿಯರ ವಿಭಾಗಗಳಲ್ಲಿ ನಡೆಯಲಿದೆ ಎಂದರು.