ಬಳ್ಳಾರಿ: ದೇವಿನಗರ ಬಡಾವಣೆ ಯುವಕ ನಾಪತ್ತೆ, ಪತ್ತೆಗೆ ಪೊಲೀಸರ ಮನವಿ
ನಗರದ ದೇವಿನಗರ ಬಡಾವಣೆಯ ಕುರುಬರ ಹಾಸ್ಟೆಲ್ ಹತ್ತಿರದ ನಿವಾಸಿಯಾದ ಹೈದರಾಲಿ ಎನ್ನುವ 28 ವರ್ಷದ ಯುವಕ ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಅಂದಾಜು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈ ಭುಜದ ಹತ್ತಿರ ಓಂ, ಶಿಲುಬೆ, ಅರ್ಧಚಂದ್ರ ಹಚ್ಚೆ ಮತ್ತು ಬಲ ಎದೆಯ ಮೇಲೆ ಅಮ್ಮ ಎಂದು ಹಾಕಿಸಿಕೊಂಡಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಟಿ-ಶರ್ಟ್, ಕಂದು ಬಣ್ಣದ ಜರ್ಕಿನ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.