ಪಾಂಡವಪುರ: ಶಂಭೂನಹಳ್ಳಿ ಗ್ರಾಮದಲ್ಲಿ ಎರಡು ಅಂಗಡಿಗಳಲ್ಲಿ ದುಷ್ಕರ್ಮಿಗಳಿಂದ ಕಳ್ಳತನ
ಪಾಂಡವಪುರ ತಾಲೂಕಿನ ಶಂಭೂನಹಳ್ಳಿ ಗ್ರಾಮದಲ್ಲಿ ಎರಡು ಅಂಗಡಿಗಳಲ್ಲಿ ದುಷ್ಕರ್ಮಿಗಳು ಕಳ್ಳತನ ಜರುಗಿದೆ ಪಾಂಡವಪುರ ತಾಲೂಕಿನ ಶಂಭೂನಹಳ್ಳಿ ಗ್ರಾಮದ ದೊಡ್ಡ ಆಲದಮರದ ಕ್ರಾಸ್ ಬಳಿ ಎರಡು ಕಬ್ಬಿಣದ ಪೆಟ್ಟಿಗೆ ಅಂಗಡಿಗಳ ಬೀಗ ಮುರಿದು ದುಷ್ಕರ್ಮಿಗಳು ಕಳ್ಳತನ ನಡೆಸಿದ್ದಾರೆ. ಟೀ ಮತ್ತು ಕಬಾಬ್ ಸೆಂಟರ್ ಅಂಗಡಿಗಳಲ್ಲಿ ತಡರಾತ್ರಿ ನಡೆದ ಈ ಕಳ್ಳತನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ದೋಚಿ ಪರಾರಿಯಾಗಿದ್ದಾರೆ . ಈ ಸಂಬಂಧ ಪಾಂಡವಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರನ್ನು ಹಿಡಿದು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಬುಧವಾರ ಬೆಳಗ್ಗೆ 10:00 ಗಂಟೆಯಲ್ಲಿ ಆಗ್ರಹಿಸಿದ್ದಾರೆ.