ಚಡಚಣ: ಮೃತ ಭೀಮನಗೌಡ ಮಗನ ಕಿಡ್ನ್ಯಾಪ್ ಮಾಡಲು ಯತ್ನ ಆರೋಪ, ಇದನ್ನು ಖಂಡಿಸಿ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ
ಇತ್ತೀಚೆಗೆ ಭೀಮಾತೀರದ ಭೀಮನಗೌಡ ಬಿರಾದಾರ್ ಮೇಲೆ ಗುಂಡಿಕ್ಕಿ ಕಳೆದ ಸೆಪ್ಟೆಂಬರ್ 3 ರಂದು ದೇವರ ನಿಂಬರಗಿ ಗ್ರಾಮದಲ್ಲಿ ಹತ್ಯೆ ಮಾಡಿದ್ದ ಹಂತಕರು ಈಗ ಅವರ ಮಗನನ್ನು ಕಿಡ್ನ್ಯಾಪ್ ಮಾಡಲು ಯತ್ನ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಅದೇ ಗ್ರಾಮದ ಸುನೀಲ್ ಎಂಬಾತನಿಂದ ಅಪಹರಣ ಮಾಡುವ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಇದನ್ನು ಖಂಡಿಸಿ ಚಡಚಣ ಕ್ರಾಸ್ ಬಳಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.