ಚಿಂಚೋಳಿ: ಬೋಗಾಲಿಂಗದಹಳ್ಳಿ ತಾಂಡಾದಲ್ಲಿ ಸಾಂಪ್ರದಾಯಿಕವಾಗಿ ದೀಪಾವಳಿ: ಕುಣಿದು ಕುಪ್ಪಳಿಸಿದ ಲಂಬಾಣಿ ಯುವತಿಯರು
ಕಲಬುರಗಿ : ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೋಗಾಲಿಂಗದಾಹಳ್ಳಿ ತಾಂಡಾದಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಯುವತಿಯವರು ಡಿಜೆ ಲಂಬಾಣಿ ಹಾಡಿನೊಂದಿಗೆ ಕುಣಿದು ಕುಪ್ಪಳಿಸಿ ಹೆಜ್ಜೆಯೊಂದಿಗೆ ಹೆಜ್ಜೆಯನ್ನು ಹಾಕುತ್ತಾ ಕುಣಿಯುತ್ತ ದೀಪಾವಳಿಯನ್ನು ಹಬ್ಬವನ್ನು ಆಚರಿಸಿದರು.. ಅ23 ರಂದು ಬೆಳಗ್ಗೆ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಪಟಾಕಿ ಸಿಡಿಸದೇ ಲಂಬಾಣಿ ಸಮಾಜದ ಜನ ಸಾಂಪ್ರದಾಯಿಕವಾಗಿ ದೀಪಾವಳಿ ಆಚರಿಸಿ ಮಾದರಿಯಾಗಿದ್ದಾರೆ.