ನಾಗಮಂಗಲ: ಪಟ್ಟಣದಲ್ಲಿ ದಿನಸಿ ವ್ಯಾಪಾರಿ ಮನೆಗೆ ಹಾಡಹಗಲೇ ಕನ್ನ: 25 ಲಕ್ಷ ರೂ ಮೌಲ್ಯದ ಚಿನ್ನಾಭರಣ, ನಗದು ದೋಚಿರುವ ಕಳ್ಳರು
ದಿನಸಿ ವ್ಯಾಪಾರಿ ಮನೆಗೆ ಹಾಡಹಗಲೇ ಕನ್ನ ಹಾಕಿರುವ ಕಳ್ಳರು 25 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ನಾಗಮಂಗಲದ ಮೈಲಾರಪಟ್ಟಣ ರಸ್ತೆಯಲ್ಲಿ ಜರುಗಿದ್ದು ತಡವಾಗಿ ವರದಿಯಾಗಿದೆ. ವಿನಯ್ ಎನ್.ಪಿ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ವಿನಯ್ ಪತ್ನಿ ತನ್ನ ತಾಯಿ ಮನೆಗೆ ತೆರಳಿದ್ದ ವೇಳೆ ಹಿಂದಿನ ಬಾಗಿಲು ಹೊಡೆದು ರೂಂನ ವಾಡ್೯ರೂಂ ಮೀಟಿ ಕಳ್ಳತನ ಮಾಡಲಾಗಿದೆ. 300 ಗ್ರಾಂ ತೂಕದ ಚಿನ್ನದ ಅಭರಣಗಳು, 2 ಕೆಜಿ ತೂಕದ ಬೆಳ್ಳಿಯ ವಸ್ತುಗಳು ಮತ್ತು 2 ಲಕ್ಷ ರೂ ನಗದು ಹಣವನ್ನು ಕಳ್ಳತನ ಮಾಡಲಾಗಿದೆ. ಈ ಕುರಿತು ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಅರಂಭಿಸಿದ್ದಾರೆ.