ಮೊಳಕಾಲ್ಮುರು: ದಸರಾ ಹಬ್ಬದ ಆಯುಧ ಪೂಜೆ ಅಂಗವಾಗಿ ರಾಂಪುರ ಗ್ರಾಮದಲ್ಲಿ ತಮ್ಮ ವಾಹನಕ್ಕೆ ಪೂಜೆ ಸಲ್ಲಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ
ಮೊಳಕಾಲ್ಮುರು:-ವಿಜಯದಶಮಿಯ ಅಂಗವಾಗಿ ಹಲವು ಮಂದಿ ತಮ್ಮ ಉದ್ಯೋಗಕ್ಕೆ, ಜೀವನೋಪಾಯಕ್ಕೆ ಸಂಬಂಧಿಸಿದ ಉಪಕರಣಗಳಿಗೆ ಆಯುಧ ಪೂಜೆ ಮಾಡುವುದು ವಾಡಿಕೆ. ದಸರಾ ಹಬ್ಬದ ಆಯುಧ ಪೂಜೆ ಅಂಗವಾಗಿ ಶಾಸಕ ಎನ್ ವೈ ಗೋಪಾಲಕೃಷ್ಣ ತಮ್ಮ ಸಾರ್ವಜನಿಕ ಸೇವೆಯಲ್ಲಿ ಸದಾ ಬಳಕೆಯಾಗುವ ವಾಹನಕ್ಕೆ ಪೂಜೆ ಸಲ್ಲಿಸಿದರು. ಶಾಸಕರ ಕಾರಿಗೆ ಹೂವುಗಳಿಂದ ಅಲಂಕರಿಸಿ, ಅರಿಶಿನ–ಕುಂಕುಮ ಹಚ್ಚಿ, ನಿಂಬೆ ಹಾಕಿ, ಪೂಜೆ ಸಲ್ಲಿಸಿದರು.ವಾಹನವು ತಮ್ಮ ಸೇವಾ ಕಾರ್ಯದಲ್ಲಿ, ಜನ ಸಂಪರ್ಕದಲ್ಲಿ, ಸಾರ್ವಜನಿಕ ಜೀವನದಲ್ಲಿ ಮುಖ್ಯವಾದ ಸಾಧನವಾಗಿರುವುದರಿಂದ ಕೃತಜ್ಞತೆಯ ಸೂಚಕವಾಗಿದೆ.