ಬಿಸಿಲಿನ ಬೇಗೆಗೆ ಕಂಗೆಟ್ಟಿದಂತಹ ಶಿವಮೊಗ್ಗ ನಗರದ ಜನತೆಗೆ ವರುಣದೇವ ತಂಪೆರದಿದ್ದಾನೆ.ಶುಕ್ರವಾರ ಸಂಜೆ ಶಿವಮೊಗ್ಗ ನಗರದಾದ್ಯಂತ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಬೆಳಗ್ಗೆಯಿಂದಲೇ ಶಿವಮೊಗ್ಗ ನಗರದ ಅತ್ಯಂತ ವಿಪರೀತ ಬಿಸಿಲಿನಿಂದ ವಾತಾವರಣ ಕೂಡಿತ್ತು. ಆದರೆ ಸಂಜೆ ಸುರಿದ ಮಳೆಯಿಂದಾಗಿ ಶಿವಮೊಗ್ಗ ನಗರದ ವಾತಾವರಣ ತಂಪಾಗಿದ್ದು ಸಾರ್ವಜನಿಕರಲ್ಲಿ ಮಂದಹಾಸ ಮೂಡಿದೆ.